ಪೋಸ್ಟ್‌ಗಳು

ಜೈ ಶ್ರೀ ರಾಮ

                 ರಾಮ ಮಂದಿರ                                       ರಾಮ ಮಂದಿರವಿದು ರಾಷ್ಟ್ರ ಮಂದಿರವಿದು ಕರ ಸೇವಕರ ತ್ಯಾಗ ಮಂದಿರವಿದು ಹಿರಿ ಜೀವಿಗಳ ಕನಸಿನ ಮಂದಿರವಿದು ರಾಮನ ಮಂದಿರವಿದು ..   ದಶರಥನಂದನ ಮಂದಿರವಿದು ಭರತನ ಪ್ರತಿಜ್ಞಾ ಮಂದಿರವಿದು ಲಕ್ಷ್ಮಣನ ಸಹೋದರ ಮಂದಿರವಿದು ಹನುಮಂತನ ಪ್ರಭುವಿನ ಮಂದಿರವಿದು ರಾಮ ಮಂದಿರವಿದು ...   ಸಾಧು ಸಂತರ ಸಂಗಮ ಮಂದಿರವಿದು ಭಕ್ತರ ಮುಕ್ತಿ ಹೊಂದುವ ಮಂದಿರವಿದು ಸನ್ಯಾಸಿಗಳಿಗೆ ಮೋಕ್ಷ ಪಡೆಯುವ ಮಂದಿರ ರಾಮನಿಗಾಗಿ ರಕ್ತ ಹರಿಸಿದ ಮಂದಿರವಿದು ರಾಮ ಮಂದಿರವಿದು ..     ವಿರೋಧಿಗಳ ಕಾಲ್ಪನಿಕ ಮಂದಿರವಿದು ಸೆಕ್ಯುಲರಗಳ ಜಾತಿಯ ಮಂದಿರವಿದು ವಿಧೇಶಿಗರ ಪ್ರವಾಸ ಮಂದಿರವಿದು ಸರಕಾರಕ್ಕೆ ಆಧಾಯ ಮಂದಿರವಿದು ರಾಮ ಮಂದಿರವಿದು .   ಯಾರ ಮಂದಿರವಿದು ಯಾವ ಮಂದಿರವಿದು ರಾಮ ಮಂದಿರವಿದು ರಾಷ್ಟ್ರ ಮಂದಿರವಿದು….. ಮಹೇಶ್ ಹ...

ಜೀವನ

 ಯಾರು ಊಹಿಸದ ಜೀವನ  ಯಾರು ಬಯಸದ ಜೀವನ  ಯಾರಿಗಾಗಿ ಜೀವನ  ಯಾವ ಮೋಹಕ್ಕಾಗಿ ಯೌವನ || ಬಯಕೆಗಳು ಭಯದಲ್ಲೇ ಬರಿದಾಗುತ್ತಿವೆ  ಬಾಲ್ಯಗಳು ಬೇಲಿಯಲ್ಲಿ ಕೊಳೆಯುತ್ತಿವೆ  ಮನಸ್ಸು ಮರ್ಕಟವಾಗಿ ಕುಣಿಯುತ್ತಿದೆ  ಜೀವನ ಜಿಗುಪ್ಸೆಯಾಗಿ ಸೊರಗುತ್ತಿದೆ || ಆತ್ಮವೋ ಅವಲೋಕನಕ್ಕಾಗಿ ಚಡಪಡಿಸುತ್ತಿದೆ  ದೇಹಾತ್ಮ ಮೋಕ್ಷಕ್ಕಾಗಿ ಹವನಿಸುತ್ತಿದೆ  ಬಂದು ಬಳಗವೆಲ್ಲ ಬಣ್ಣಿಸದೆ ಶಪಿಸುತ್ತಿವೆ  ಯಾರಿಗಾಗಿ ಜೀವನ ಯಾವುದಕ್ಕಾಗಿ ಜೀವನ..||

ಅನುಸರಿಸು

M: ಯಾರಲ್ಲಿ ಕಾತುರವೋ ಅವರನ್ನು ಮೋಹಿಸು ಯಾರಲ್ಲಿ ಆತುರವೋ ಅವರನ್ನು  ಕಾಯಿಸು ಯಾರಲ್ಲಿ ಕರಿನೆರಳು ಸೋಕುವುದೋ ವ್ಯವಹರಿಸದಿರು ಯಾರಲ್ಲಿ ನಿನ್ನ ಮನ ಕರಗುವುದೋ ಉಪಚರಿಸು. ಆಶೆಗಳು ಎಷ್ಟಿದ್ದರೇನು ಆಸರೆಗಳು ಇಲ್ಲದಿರುವಾಗ  ಅಹಂಕಾರ ಎಷ್ಟಿದ್ದರೇನು ಆತ್ಮೀಯತೆ ಇಲ್ಲದಿರುವಾಗ  ಅಲಂಕಾರ ಎಷ್ಟಿದ್ದರೇನು ಒಳ್ಳೆಯ ಮನಸ್ಸು ಇಲ್ಲದಿರುವಾಗ ಆಚಾರ ಎಷ್ಟಿದ್ದರೇನು ವಿಚಾರ ಇಲ್ಲದಿರುವಾಗ. ಬರಿದ ಬಯಕೆಗಳು ಹೊತ್ತು ಜೀವನ ದುಭಾರಿಯಾಗಿದೆ ಭಾವನೆಗಳಿಗೆ ಸ್ಪಂದಿಸದ ಸಂಬಂಧಗಳು ಶ್ಮಶಾನದ ಮೌನದಂತಿದೆ ಬೇಸರದ ಸಂಗಾತಿಗಳು ಮನದಲ್ಲಿ ಸಂತೆ ಮಾಡುತ್ತಿವೆ ಅಳಿವ ದೇಹಕ್ಕಿಂತ ಅಳಿಯದ ಆತ್ಮ ಸಂಬಂದಕ್ಕೆ ಸ್ಪಂದಿಸು

ಬರುವ ದಿನಗಳು

ಅಜ್ಞಾನಿಗೆ ಸುಖ ದುಃಖಗಳ ಪರಿಚವಿಯವಿಲ್ಲ ಅಹಂಕಾರಿಗೆ ಹಾಡಿ ಹೋಗಳುವವರಿಲ್ಲ ಕನ್ನ ಹಾಕುವ ಮನಗಳಿಗೆ ಇಂದು ನಾಳೆಗಳ ಅವಶ್ಯಕತೆವಿಲ್ಲ . ಕತ್ತಲ ಬೆಳಕಿನ ಜೀವನಕ್ಕೆ ಆಸೆ ಎಂಬ ಬೀಜಗಳು ಬಿತ್ತಿ ಕಣ್ಣಿರೆಂಬ  ಮಳೆಯನ್ನು ಸುರಿಸಿ ಸಂಬಂಧಗಳೆಂಬ ಬೆಳೆಯನ್ನು ಬೆಳೆಸಿ  ಬಳಸದೆ ಹಳಿಸಬಹುದು ಸಂಸಾರ ಸಾಗರದಲ್ಲಿ. ಕಡಲ ತೀರದ ಮೌನವು ಒಡೆದ ಮನಸ್ಸಿನ ಆಳವೂ ಯಾರು ತಿಳಿಯದೋ ಯಾರು ಅಳೆಯುವವರೊ ಘಾಸಿಗೊಳಿಸಿದ ಮನಕ್ಕೆ ಮಧು ಯಾರು ಏರಗುವವರು. ಮಹೇಶ್ ಹೂಗಾರ್.

ಗಾನ ಗಾರುಡಿಗ

ಏನೆಂದು ವರ್ಣಿಸಲಿ ಎಸ್. ಪಿ. ಬಿ  ಗಾನ ಕೋಗಿಲೆಯ ಕಂಠ ಧ್ವನಿ ನಿಮ್ಮದು ಮಿತಿಮೀರಿದ ಜ್ಞಾನಕ್ಕೆ ಕೊನೆಯೆಲ್ಲಿ ಸ್ವರ್ಗದಲ್ಲಿಯೂ ಸ್ವರ ಸಾಮ್ರಾಟನಾಗಿ. ಹಾಡಿರದ ಭಾಷೆಯಿಲ್ಲ ಗಾನ ಗಾರುಡಿಗನಿಗೆ ಹಾಡಿಗೆ ಅಹಂಕಾರವಿಲ್ಲ ಸ್ವರ ಸಾಮ್ರಾಟನಿಗೆ ಮದವೇರದ ಮನುಷ್ಯ ನಿವೂ, ಮತ ಎಣಿಸದ ಸಹೃದಯಿ ನಿವೂ. ಕನ್ನಡ ನಾಡಿನ ಹೆಮ್ಮೆಯ ಕೋಗಿಲೆ  ಕೇಳದಾಯಿತು ಕೋಗಿಲೆ ಧ್ವನಿಯನ್ನ ಸಂಗೀತ ಸಾಮ್ರಾಜ್ಯದ ದೋರೆ ನಿವೂ ಸ್ವರಗಳು ಕಾದು ಕುಳಿತಿವೆ ನಿಮ್ಮ ಧ್ವನಿಗಾಗಿ.                             ಮಹೇಶ್ ಹೂಗಾರ್.

ಕಲ್ಯಾಣ ನಾಡು

ಬಸವ ಬಿಜ್ಜಳರ ನಾಡು ಈ ಕಲ್ಯಾಣ ನಾಡು ಕಪ್ಪು ಮಣ್ಣಿನಲ್ಲಿ ಹೊನ್ನು ಬೆಳೆಯುವ ನಾಡು ನೃಪತುಂಗ ಚಕ್ರವರ್ತಿ ಆಳಿದ ಬಿಡು ಇಷ್ಟಾದರೂ ಯಾಕೆ ಹಿಂದುಳಿದಿದೆ ನಾಡು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರು ನಾಡಿಗೆ ಸಿಗಲಿಲ್ಲ ಉಕ್ಕಿನ ಮನುಷ್ಯನ ಕೆಚ್ಚೆದೆಯ ಸಾಹಸ  ಸ್ವಾತಂತ್ರವಾಯಿತು ಕಲ್ಯಾಣ ನಾಡು ನನಸಾಗುತ್ತದೊ ಕಂಡ ಕನಸುಗಳು  ಯಾರು ಅರಿಯರು ಅಭಿವೃದ್ಧಿಯ ಹಾದಿ.  ಯಾಕಿಷ್ಟು ಮುನಿಸು ಈ ನೆಲದ ಮೇಲೆ  ಕಡೆಗಣಿಸದಿರಿ ಈ ಕಲ್ಯಾಣ ನಾಡು  ಕಡೆಗಾಲಕ್ಕೆ ಕೊಡೆಯೇ ಆಸರೆ  ಕಡಿಮೆಯಯಾಯಿತೆ ಈ ನೆಲದವರ ಪ್ರೀತಿ.   ಎಲ್ಲವೂ ಇದೆ ಏನೆಲ್ಲ ಮಾಡಬೇಕು ಅನ್ನೋದು ಗೊತ್ತಿದೆ ಮಾಡುವ ಮನಸುಗಳ ಕೊರತೆ ಕಾಣುತ್ತಿದೆ, ಕಾಯಕದಿಂದ ಕೈಲಾಸ ತೋರಿಸಿ ಕೊಟ್ಟ ಬಿಡು ಕಲಿಯುಗಕ್ಕೆ ಧರ್ಮದ ಮೂಲ ತಿಳಿಸಿ ಕೊಟ್ಟ ನಾಡು.                                            ಮಹೇಶ್ ಹೂಗಾರ್

ಹುಣ್ಣಿಮೆ ಚಂದ್ರ

 ನಡುರಾತ್ರಿ ಕಾನನದಲ್ಲಿ ಬೆಳಕು ಹೇಗೆ ಹುಡುಕಲಿ ಚಂದ್ರ ನೀನಿಲ್ಲದೆ ಹುಣ್ಣಿಮೆ ಬೆಳದಿಂಗಳು ಕಳೆ ಗುಂದಿದೆ ಭಾನಿನ ಮೊಡದೊಳಗೆ ನಿನ್ನ ಛಾಯೆ || ತಾರೆಗಳು ಕಾಣದಾಗಿದೆ ಮೋಡದ ಮುಸುಕಿನಲಿ ಹಕ್ಕಿಗಳು ಗೂಡು ಸೇರುತ್ತಿವೆ ಸಂಗಾತಿಗಳೊಡನೆ ನೀಲಿ ಬಾನು ಕಪ್ಪೋಡೋದು ಕಗ್ಗತ್ತಲೆಯಾಗುತ್ತಿದೆ ಸಾಗಿಸು ನನ್ನ ಕೊನೆಯ ತಿರದವರೆಗೆ..||  ಮೋಡ ಮುಸುಕಿದೆ ಆಗಸದಲ್ಲಿ ಬರ ಸಿಡಿಲುಗಳು ದರೆಗೆ ಒರೆಯಲು ಆಸರೆ ಆಗುತ್ತಿದೆ ತಣ್ಣನೆ ಗಾಳಿ ಮಳೆ ಹನಿ ಬೀಳಲು ಹಾಯ್ ಏನುಸುತ್ತಿದೆ ಜೀವ..||  ಕೈ ಹಿಡಿದು ನಡೆಸು ಚಂದ್ರ ನಿನ್ನ ಬೆಳದಿಂಗಳಲ್ಲಿ ಕಾಡಿನಲ್ಲಿ ಅಲೆದಾಡಿ ದಡ ಸೇರೊ ಆಶೆ ನನ್ನದೂ ಮರೆತು ಹೋಗಿದೆ ನಾ ಬಂದ ಧಾರಿ ನಿನ್ನ ನೇರಳೆ ನನಗೆ ದಡ ಸೇರಿಸುವ ನಾವಿಕನಾಗಲಿ.||         ಮಹೇಶ್ ಹೂಗಾರ್