ಅನುಸರಿಸು
M:
ಯಾರಲ್ಲಿ ಕಾತುರವೋ ಅವರನ್ನು ಮೋಹಿಸು
ಯಾರಲ್ಲಿ ಆತುರವೋ ಅವರನ್ನು ಕಾಯಿಸು
ಯಾರಲ್ಲಿ ಕರಿನೆರಳು ಸೋಕುವುದೋ ವ್ಯವಹರಿಸದಿರು
ಯಾರಲ್ಲಿ ನಿನ್ನ ಮನ ಕರಗುವುದೋ ಉಪಚರಿಸು.
ಆಶೆಗಳು ಎಷ್ಟಿದ್ದರೇನು ಆಸರೆಗಳು ಇಲ್ಲದಿರುವಾಗ
ಅಹಂಕಾರ ಎಷ್ಟಿದ್ದರೇನು ಆತ್ಮೀಯತೆ ಇಲ್ಲದಿರುವಾಗ
ಅಲಂಕಾರ ಎಷ್ಟಿದ್ದರೇನು ಒಳ್ಳೆಯ ಮನಸ್ಸು ಇಲ್ಲದಿರುವಾಗ
ಆಚಾರ ಎಷ್ಟಿದ್ದರೇನು ವಿಚಾರ ಇಲ್ಲದಿರುವಾಗ.
ಬರಿದ ಬಯಕೆಗಳು ಹೊತ್ತು ಜೀವನ ದುಭಾರಿಯಾಗಿದೆ
ಭಾವನೆಗಳಿಗೆ ಸ್ಪಂದಿಸದ ಸಂಬಂಧಗಳು ಶ್ಮಶಾನದ ಮೌನದಂತಿದೆ
ಬೇಸರದ ಸಂಗಾತಿಗಳು ಮನದಲ್ಲಿ ಸಂತೆ ಮಾಡುತ್ತಿವೆ
ಅಳಿವ ದೇಹಕ್ಕಿಂತ ಅಳಿಯದ ಆತ್ಮ ಸಂಬಂದಕ್ಕೆ ಸ್ಪಂದಿಸು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ