ಸ್ವಾತಂತ್ರ್ಯ ಹೋರಾಟದ ಹಾದಿ
ಗುಂಡಿಗೆ ಗುಂಡು ಬಿದ್ದರು
ಗಂಡೆದೆಯ ಯುವಕರು ಅಳುಕಲಿಲ್ಲ
ಎದೆ ಸೀಳಿ ನೆತ್ತರು ಹರಿದರೂ
ಮುನ್ನುಗ್ಗುತ್ತಿದ್ದರು ಸ್ವಾತಂತ್ರ್ಯ ವೀರರು
ಪರಕೀಯರ ದಾಸ್ಯದಿಂದ ಮುಕ್ತಿಗೊಳ್ಳಲು
ಮುಕ್ತ ಮಾಡಬೇಕಿತ್ತು ಬ್ರಿಟಿಷರ ಆಳ್ವಿಕೆಗೆ
ಶಾಂತಿ ಸಂಧಾನದಿಂದ ಬಗೆ ಹರಿಯದೆ
ಕ್ರಾಂತಿ ಮೂಡಿಸಿದರು ಯುವಕರ ಎದೆಯಲ್ಲಿ
ಯುದ್ಧ ಭೂಮಿಯಲ್ಲಿ ಕದ್ದ ಕಥನಗಳೆಷ್ಟು
ಮರೆ ಮಾಚುತ್ತಿದೆ ವೀರರ ಇತಿಹಾಸ
ಚರಕದಿಂದ ಸಾಧ್ಯವಿಲ್ಲ ಕೇವಲ ನರಕದಿಂದ
ಸ್ವಾತಂತ್ರ್ಯವಾಯಿತು ಜನ್ಮ ಭೂಮಿ
ಭಾರತ ಮಾತೆ ನಿನಗೆ ವಂದಿಸುವೆ
ಸ್ವಾತಂತ್ರ್ಯ ವೀರರ ಮಗನಾಗಿ
ವಿರ ಸೈನ್ಯದ ಖಡ್ಗವಾಗಿ,ಬಂದೂಕಾಗಿ
ನಿನ್ನ ಪಾದಗಳಿಗೆ ನನ್ನ ಅನಂತ ನಮನಗಳು..
ಜೈ ಹಿಂದ್
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ