ಜೀವನ
ಯಾರು ಊಹಿಸದ ಜೀವನ
ಯಾರು ಬಯಸದ ಜೀವನ
ಯಾರಿಗಾಗಿ ಜೀವನ
ಯಾವ ಮೋಹಕ್ಕಾಗಿ ಯೌವನ ||
ಬಯಕೆಗಳು ಭಯದಲ್ಲೇ ಬರಿದಾಗುತ್ತಿವೆ
ಬಾಲ್ಯಗಳು ಬೇಲಿಯಲ್ಲಿ ಕೊಳೆಯುತ್ತಿವೆ
ಮನಸ್ಸು ಮರ್ಕಟವಾಗಿ ಕುಣಿಯುತ್ತಿದೆ
ಜೀವನ ಜಿಗುಪ್ಸೆಯಾಗಿ ಸೊರಗುತ್ತಿದೆ ||
ಆತ್ಮವೋ ಅವಲೋಕನಕ್ಕಾಗಿ ಚಡಪಡಿಸುತ್ತಿದೆ
ದೇಹಾತ್ಮ ಮೋಕ್ಷಕ್ಕಾಗಿ ಹವನಿಸುತ್ತಿದೆ
ಬಂದು ಬಳಗವೆಲ್ಲ ಬಣ್ಣಿಸದೆ ಶಪಿಸುತ್ತಿವೆ
ಯಾರಿಗಾಗಿ ಜೀವನ ಯಾವುದಕ್ಕಾಗಿ ಜೀವನ..||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ