ಬರುವ ದಿನಗಳು


ಅಜ್ಞಾನಿಗೆ ಸುಖ ದುಃಖಗಳ ಪರಿಚವಿಯವಿಲ್ಲ
ಅಹಂಕಾರಿಗೆ ಹಾಡಿ ಹೋಗಳುವವರಿಲ್ಲ
ಕನ್ನ ಹಾಕುವ ಮನಗಳಿಗೆ
ಇಂದು ನಾಳೆಗಳ ಅವಶ್ಯಕತೆವಿಲ್ಲ .

ಕತ್ತಲ ಬೆಳಕಿನ ಜೀವನಕ್ಕೆ ಆಸೆ ಎಂಬ
ಬೀಜಗಳು ಬಿತ್ತಿ ಕಣ್ಣಿರೆಂಬ 
ಮಳೆಯನ್ನು ಸುರಿಸಿ ಸಂಬಂಧಗಳೆಂಬ
ಬೆಳೆಯನ್ನು ಬೆಳೆಸಿ 
ಬಳಸದೆ ಹಳಿಸಬಹುದು ಸಂಸಾರ ಸಾಗರದಲ್ಲಿ.

ಕಡಲ ತೀರದ ಮೌನವು
ಒಡೆದ ಮನಸ್ಸಿನ ಆಳವೂ
ಯಾರು ತಿಳಿಯದೋ ಯಾರು ಅಳೆಯುವವರೊ
ಘಾಸಿಗೊಳಿಸಿದ ಮನಕ್ಕೆ ಮಧು ಯಾರು ಏರಗುವವರು.

ಮಹೇಶ್ ಹೂಗಾರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈ ಶ್ರೀ ರಾಮ

ಜೀವನ

ಸ್ವಾತಂತ್ರ್ಯ ಹೋರಾಟದ ಹಾದಿ