ಕಲ್ಯಾಣ ನಾಡು
ಬಸವ ಬಿಜ್ಜಳರ ನಾಡು ಈ ಕಲ್ಯಾಣ ನಾಡು
ಕಪ್ಪು ಮಣ್ಣಿನಲ್ಲಿ ಹೊನ್ನು ಬೆಳೆಯುವ ನಾಡು
ನೃಪತುಂಗ ಚಕ್ರವರ್ತಿ ಆಳಿದ ಬಿಡು
ಇಷ್ಟಾದರೂ ಯಾಕೆ ಹಿಂದುಳಿದಿದೆ ನಾಡು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರು ನಾಡಿಗೆ ಸಿಗಲಿಲ್ಲ
ಉಕ್ಕಿನ ಮನುಷ್ಯನ ಕೆಚ್ಚೆದೆಯ ಸಾಹಸ
ಸ್ವಾತಂತ್ರವಾಯಿತು ಕಲ್ಯಾಣ ನಾಡು
ನನಸಾಗುತ್ತದೊ ಕಂಡ ಕನಸುಗಳು
ಯಾರು ಅರಿಯರು ಅಭಿವೃದ್ಧಿಯ ಹಾದಿ.
ಯಾಕಿಷ್ಟು ಮುನಿಸು ಈ ನೆಲದ ಮೇಲೆ
ಕಡೆಗಣಿಸದಿರಿ ಈ ಕಲ್ಯಾಣ ನಾಡು
ಕಡೆಗಾಲಕ್ಕೆ ಕೊಡೆಯೇ ಆಸರೆ
ಕಡಿಮೆಯಯಾಯಿತೆ ಈ ನೆಲದವರ ಪ್ರೀತಿ.
ಎಲ್ಲವೂ ಇದೆ ಏನೆಲ್ಲ ಮಾಡಬೇಕು ಅನ್ನೋದು ಗೊತ್ತಿದೆ
ಮಾಡುವ ಮನಸುಗಳ ಕೊರತೆ ಕಾಣುತ್ತಿದೆ,
ಕಾಯಕದಿಂದ ಕೈಲಾಸ ತೋರಿಸಿ ಕೊಟ್ಟ ಬಿಡು
ಕಲಿಯುಗಕ್ಕೆ ಧರ್ಮದ ಮೂಲ ತಿಳಿಸಿ ಕೊಟ್ಟ ನಾಡು.
ಮಹೇಶ್ ಹೂಗಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ