ಹುಣ್ಣಿಮೆ ಚಂದ್ರ
ನಡುರಾತ್ರಿ ಕಾನನದಲ್ಲಿ ಬೆಳಕು ಹೇಗೆ
ಹುಡುಕಲಿ ಚಂದ್ರ ನೀನಿಲ್ಲದೆ
ಹುಣ್ಣಿಮೆ ಬೆಳದಿಂಗಳು ಕಳೆ ಗುಂದಿದೆ
ಭಾನಿನ ಮೊಡದೊಳಗೆ ನಿನ್ನ ಛಾಯೆ ||
ತಾರೆಗಳು ಕಾಣದಾಗಿದೆ ಮೋಡದ ಮುಸುಕಿನಲಿ
ಹಕ್ಕಿಗಳು ಗೂಡು ಸೇರುತ್ತಿವೆ ಸಂಗಾತಿಗಳೊಡನೆ
ನೀಲಿ ಬಾನು ಕಪ್ಪೋಡೋದು ಕಗ್ಗತ್ತಲೆಯಾಗುತ್ತಿದೆ
ಸಾಗಿಸು ನನ್ನ ಕೊನೆಯ ತಿರದವರೆಗೆ..||
ಮೋಡ ಮುಸುಕಿದೆ ಆಗಸದಲ್ಲಿ
ಬರ ಸಿಡಿಲುಗಳು ದರೆಗೆ ಒರೆಯಲು
ಆಸರೆ ಆಗುತ್ತಿದೆ ತಣ್ಣನೆ ಗಾಳಿ
ಮಳೆ ಹನಿ ಬೀಳಲು ಹಾಯ್ ಏನುಸುತ್ತಿದೆ ಜೀವ..||
ಕೈ ಹಿಡಿದು ನಡೆಸು ಚಂದ್ರ ನಿನ್ನ ಬೆಳದಿಂಗಳಲ್ಲಿ
ಕಾಡಿನಲ್ಲಿ ಅಲೆದಾಡಿ ದಡ ಸೇರೊ ಆಶೆ ನನ್ನದೂ
ಮರೆತು ಹೋಗಿದೆ ನಾ ಬಂದ ಧಾರಿ
ನಿನ್ನ ನೇರಳೆ ನನಗೆ ದಡ ಸೇರಿಸುವ ನಾವಿಕನಾಗಲಿ.||
ಮಹೇಶ್ ಹೂಗಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ