ಗಾನ ಗಾರುಡಿಗ

ಏನೆಂದು ವರ್ಣಿಸಲಿ ಎಸ್. ಪಿ. ಬಿ 
ಗಾನ ಕೋಗಿಲೆಯ ಕಂಠ ಧ್ವನಿ ನಿಮ್ಮದು
ಮಿತಿಮೀರಿದ ಜ್ಞಾನಕ್ಕೆ ಕೊನೆಯೆಲ್ಲಿ
ಸ್ವರ್ಗದಲ್ಲಿಯೂ ಸ್ವರ ಸಾಮ್ರಾಟನಾಗಿ.

ಹಾಡಿರದ ಭಾಷೆಯಿಲ್ಲ ಗಾನ ಗಾರುಡಿಗನಿಗೆ
ಹಾಡಿಗೆ ಅಹಂಕಾರವಿಲ್ಲ ಸ್ವರ ಸಾಮ್ರಾಟನಿಗೆ
ಮದವೇರದ ಮನುಷ್ಯ ನಿವೂ,
ಮತ ಎಣಿಸದ ಸಹೃದಯಿ ನಿವೂ.

ಕನ್ನಡ ನಾಡಿನ ಹೆಮ್ಮೆಯ ಕೋಗಿಲೆ 
ಕೇಳದಾಯಿತು ಕೋಗಿಲೆ ಧ್ವನಿಯನ್ನ
ಸಂಗೀತ ಸಾಮ್ರಾಜ್ಯದ ದೋರೆ ನಿವೂ
ಸ್ವರಗಳು ಕಾದು ಕುಳಿತಿವೆ ನಿಮ್ಮ ಧ್ವನಿಗಾಗಿ.
     
                      ಮಹೇಶ್ ಹೂಗಾರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈ ಶ್ರೀ ರಾಮ

ಜೀವನ

ಸ್ವಾತಂತ್ರ್ಯ ಹೋರಾಟದ ಹಾದಿ